ಚೆಸ್ ಕಲಿಯುವುದೆಲ್ಲಿ?
ನಮ್ಮ ದೇಶದ 18 ವರ್ಷ ವಯಸ್ಸಿನ ಗುಕೇಶ್ ಅವರು, ಕಳೆದ ವಾರ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ ಈ ಸಂದರ್ಭದಲ್ಲಿ ಹಲವರು ಚೆಸ್‌ನಲ್ಲಿ ತರಬೇತಿ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. 2002ರಲ್ಲಿ ವಿ. ಆನಂದ್ ಅವರು ವಿಶ್ವ ಚಾಂಪಿಯನ್ ಆಗಿದ್ದಾಗಲೂ ಇಂತಹದ್ದೇ ಆಸಕ್ತಿ ದೇಶದಾದ್ಯಂತ ಮೂಡಿಬಂದಿತ್ತು.
ಬೆಂಗಳೂರಿನಲ್ಲಿ ಚೆಸ್ ತರಬೇತಿ ನೀಡುವ ಹಲವು ಸಂಸ್ಥೆಗಳಿವೆ. ಅವುಗಳಲ್ಲಿ ಒಂದು ಎಂದರೆ, ಬೆಂಗಳೂರು ಚೆಸ್ ಅಕಾಡೆಮಿ. ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿರುವ ಬೆಂಗಳೂರು ಚೆಸ್ ಅಕಾಡೆಮಿಯು 2005ರಲ್ಲಿ ಆರಂಭವಾಯಿತು. 25 ವರ್ಷ ಅನುಭವ ಹೊಂದಿರುವ ವೇದಾಂತ್ ಗೋಸ್ವಾಮಿಯವರು ಈ ತರಬೇತಿ ಕೇಂದ್ರದ ನೇತೃತ್ವ ವಹಿಸಿದ್ದಾರೆ. ಫಿಡೆ ರೇಟಿಂಗ್ 2317 ಹೊಂದಿರುವ ಗೋಸ್ವಾಮಿಯವರು, ಏಷ್ಯನ್ ಮತ್ತು ಕಾಮನ್‌ವೆಲ್ತ್ ಚಾಂಪಿಯಿನ್‌ಶಿಪ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಜತೆಗೆ ದಕ್ಷಿಣ ಸೂಡಾನ್ ತಂಡಕ್ಕೆ ಚೆಸ್ ಒಲಿಂಪಾಯ್‌ನಲ್ಲಿ ತರಬೇತಿ ನಿಡಿದ ಅನುಭವ ಹೊಂದಿದ್ದಾರೆ. 2005ರಿಂದ ಇದುವರೆಗೆ ಸುಮಾರು 10000 ಜನರಿಗೆ ತರಬೇತಿ ನೀಡಿರುವ ಬೆಂಗಳೂರು ಚೆಸ್ ಅಕಾಡೆಮಿಯು (9880297796), ಆನ್ ಲೈನ್ ತರಬೇತಿಯನ್ನೂ ನೀಡುತ್ತದೆ. ನಮ್ಮ ದೇಶವು ಈಗ ಜಗತ್ತಿನ ಅತ್ಯುತ್ತಮ ಚೆಸ್ ಆಟಗಾರರನ್ನು ಹೊಂದಿರುವುದು ಎಲ್ಲರ ಗಮನ ಸೆಳೆದಿದೆ. ಇಪ್ಪತ್ತನೆಯ ಶತಮಾನದಲ್ಲಿ ಐರೋಪ್ಯ ದೇಶಗಳೇ (ರಷ್ಯಾ, ಪೋಲ್ಯಾಂಡ್, ನಾರ್ವೆ ಇತ್ಯಾದಿ) ಪ್ರಾಧಾನ್ಯ ಸಾಧಿಸಿದ್ದ, ಮಿದುಳಿನ ಶಕ್ತಿ ಹೆಚ್ಚಿಸುವ ಚೆಸ್ ಆಟದಲ್ಲಿ ಭಾರತದವರು ಇತ್ತೀಚೆಗಿನ ವರ್ಷಗಳಲ್ಲಿ ಮುಂದೆ ಬರುತ್ತಿರುವುದಕ್ಕೆ, ವಿ. ಆನಂದ್ ಮತ್ತು ಇತರರು ಚೆನ್ನೈನಲ್ಲಿ ನೀಡುತ್ತಿರುವ ತರಬೇತಿಯೂ ಒಂದು ಮುಖ್ಯ ಕಾರಣ. ಈಗ ಗುಕೇಶ್ ಅವರು ವಿಶ್ವ ಚಾಂಪಿಯನ್ ಆಗಿರುವ ಸಂದರ್ಭದಲ್ಲಿ, ಇನ್ನಷ್ಟು ಹೊಸ ಆಟಗಾರರು ನಮ್ಮ ದೇಶದಲ್ಲಿ ಉದಿಸುವದರಲ್ಲಿ ಸಂದೇಹವಿಲ್ಲ.
0 Comments
Post a Comment